ಸ್ವಾತಂತ್ರ್ಯೋತ್ಸವದಲ್ಲಿ ದೇಶ ಭಕ್ತಿ ಎಂದಾಕ್ಷಣ ಮಕ್ಕಳ ಸಡಗರ ದೇಶ ಭಕ್ತಿ ಎಲ್ಲವೂ ಮುಗಿಲು ಮುಟ್ಟುತ್ತೆ. ಸತತ ಎರಡು ವರ್ಷ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕೊರೋನಾ ತಣ್ಣೀರು ಎರಚಿತ್ತು. ಈಗ ಎಲ್ಲ ಎಲ್ಲೆಗಳಿಗೆ ಕಡಿವಾಣ ಬಿದ್ದಿದೆ. ಬೆಂಗಳೂರಿನ ಮಾಣಿಕ್ ಷಾ ಪರೇಡ್‍ಮೈದಾನದಲ್ಲಿ ವಿದ್ಯಾರ್ಥಿಗಳು ಆಟ - ನಾಟಕ ಪ್ರಾಕ್ಟೀಸ್‍ನಲ್ಲಿ ನಿರತರಾಗಿದ್ದಾದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಇಸುರೂ ಗ್ರಾಮಸ್ಥರು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವ ನಾಟಕ, ದೇಶ ಭಕ್ತಿ ಸಾರುವ 3 ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 3 ಶಾಲೆಯ ಮಕ್ಕಳು ಪ್ರದರ್ಶನ ನೀಡಲಿದ್ದಾರೆ.. ನಾಟಕಕ್ಕೆ ಮಾಲತೇಶ್ ಹಾಗೂ ಛಾಯಾ ಮಾಲತೇಶ್ ನಿರ್ದೇಶನ ಮಾಡುತ್ತಿದ್ದಾರೆ. 2340 ಮಕ್ಕಳು ಸರ್ಕಾರಿ, ಬಿಬಿಎಂಪಿ ಹಾಗೂ ಖಾಸಗಿ ಶಾಲೆಗಳಿಂದ ಬಂದು ನೃತ್ಯ, ನಾಟಕ ಪ್ರದರ್ಶನ ನೀಡಲಿದ್ದಾರೆ..
#publictv #independenceday